“ನಮ್ಮ ಜೀವನ ಸುಂದರವಾಗುವುದು ನಾವು ಪರಿಪೂರ್ಣರು ಎಂಬುದಕ್ಕಲ್ಲ. ನಮ್ಮ ಜೀವನ ಸುಂದರವಾಗುವುದು, ನಾವು ಮಾಡುವುದೆಲ್ಲವನ್ನೂ ಹೃದಯಪೂರ್ವಕವಾಗಿ ಮಾಡುವುದರಿಂದ."
- ಸದ್ಗುರು

ಸದ್ಗುರು

ಸದ್ಗುರು ಅವರು ಒಬ್ಬ ಯೋಗಿ, ಅನುಭಾವಿ ಹಾಗೂ ದಾರ್ಶನಿಕ. ಭಾರತದ 50 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲಾದ ಸದ್ಗುರುಗಳು, ತಮ್ಮ ಪರಿವರ್ತನಾ ಕಾರ್ಯಕ್ರಮಗಳ ಮೂಲಕ ವಿಶ್ವದಾದ್ಯಂತ ಲಕ್ಷಾಂತರ ಜನರ ಜೀವನವನ್ನು ಸ್ಪರ್ಷಿಸಿದ್ದಾರೆ. ಸದ್ಗುರುಗಳು ಪ್ರಾಚೀನ ಯೋಗ ವಿಜ್ಞಾನವನ್ನು, ಜನರ ಇಂದಿನ ಮನಸ್ಥಿತಿಗೆ ಪ್ರಸ್ತುತವಾಗುವಂತೆ ಅರ್ಪಿಸುವ ಸಾಮರ್ಥ್ಯ ಹೊಂದಿದ್ದಾರೆ. ಅವರ ವಿಧಾನವು ಯಾವುದೇ ನಂಬಿಕೆಯ ವ್ಯವಸ್ಥೆಗೆ ಸಂಬಂಧ ಹೊಂದಿಲ್ಲ. ಬದಲಾಗಿ, ಒಬ್ಬರ ಆಂತರ್ಯದ ಪರಿವರ್ತನೆಗೆ ಬೇಕಾದ ಶಕ್ತಿಯುತ ಮತ್ತು ಸಾಬೀತಾದ ವಿಧಾನಗಳನ್ನು ಹೊಂದಿರುತ್ತದೆ.

ಪ್ರಶಸ್ತಿಗಳು ಮತ್ತು ಗೌರವಗಳು

ಪದ್ಮವಿಭೂಷಣ ಪ್ರಶಸ್ತಿ

ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ಭಾರತ ಸರ್ಕಾರದಿಂದ ನೀಡಲಾಗುವ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದು, ಫೆಬ್ರವರಿ 2017 ರಲ್ಲಿ ದೊರೆಯಿತು

ನ್ಯೂಯಾರ್ಕ್ ಟೈಮ್ಸ್ ನಿಂದ ಬೆಸ್ಟ್ ಸೆಲ್ಲರ್ ಬಿರುದು

ಇನ್ನರ್ ಇಂಜಿನಿಯರಿಂಗ್: ಎ ಯೋಗೀಸ್ ಗೈಡ್ ಟು ಜಾಯ್ ಪುಸ್ತಕಕ್ಕಾಗಿ, ಸೆಪ್ಟೆಂಬರ್ 2016 ರಲ್ಲಿ

ಸ್ಪೆಶಲ್ ಕನ್ಸಲ್ಟೇಟಿವ್ ಸ್ಟೇಟಸ್(ವಿಶೇಷ ಸಮಾಲೋಚನಾ ಸ್ಥಿತಿ)

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯೊಂದಿಗೆ

ಭಾರತದ 50 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಹೆಸರಿಸಲ್ಪಟ್ಟಿರುವರು

ಇಂಡಿಯಾ ಟುಡೇ ಪತ್ರಿಕೆಯಿಂದ

ಇಂದಿರಾ ಗಾಂಧಿ ಪರ್ಯಾವರಣ ಪುರಸ್ಕಾರ

ಭಾರತದ ಅತ್ಯುನ್ನತ ಪರಿಸರ ಕಾಳಜಿಗಾದ ಪ್ರಶಂಸೆ

ಗಿನ್ನೆಸ್ ವಿಶ್ವ ದಾಖಲೆ

ಪ್ರಾಜೆಕ್ಟ್ ಗ್ರೀನ್ ಹ್ಯಾಂಡ್ಸ್ ಅಡಿಯಲ್ಲಿ, 2,00,000 ಸ್ವಯಂ ಸೇವಕರು, ಮೂರು ದಿನಗಳಲ್ಲಿ 8,00,000 ಮರಗಳನ್ನು ನೆಟ್ಟಿದ್ದಕ್ಕಾಗಿ.

ಇಂಡಿಯಾ ಟುಡೇ ಪತ್ರಿಕೆ ವತಿಯಿಂದ ಸಫ಼ಾಯಿಗಿರಿ ಪ್ರಶಸ್ತಿ

ಪ್ರಾಜೆಕ್ಟ್ ಗ್ರೀನ್ ಹ್ಯಾಂಡ್ಸ್ ಗಾಗಿ

ಸಾಮಾಜಿಕ ಜಾಲತಾಣ

ಮಾಧ್ಯಮದಲ್ಲಿ