ವೈಯಕ್ತಿಕ ಮಟ್ಟದಲ್ಲಿ ನಡೆಸುವ ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮದಲ್ಲಿ ಶಾಂಭವಿ ಮಹಾಮುದ್ರ ಕ್ರಿಯಾದ ದೀಕ್ಷೆ ನಡೆಸಿಕೊಡಲಾಗುವುದು, ಇದೊಂದು ಪುರಾತನ ಕ್ರಿಯಾಯೋಗವಾಗಿದ್ದು, ಇದನ್ನು ಪ್ರಪಂಚದಾದ್ಯಂತ ಕೋಟ್ಯಂತರ ಜನರು ನಿಷ್ಠೆಯಿಂದ ಮಾಡುತ್ತಿದ್ದಾರೆ. ವೈಜ್ಞಾನಿಕ ಅಧ್ಯಯನಗಳು, ಈ ಕ್ರಿಯೆಯನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ, ಮೆದುಳಿನ ಚಟುವಟಿಕೆಗಳು, ನಿದ್ರಾ ಶೈಲಿಗಳು, ಮಾನಸಿಕ ಹಾಗು ದೈಹಿಕ ಆರೋಗ್ಯದ ಮಟ್ಟದಲ್ಲಿ ಆಗುವ ಲಾಭವನ್ನು ಅಳತೆ ಮಾಡಿದ್ದಾರೆ.
ಇನ್ನರ್ ಇಂಜಿನಿಯರಿಂಗ್ ಆನ್ಲೈನ್ ನಲ್ಲಿ ಭಾಗವಹಿಸಿದವರಲ್ಲಿ 50% ರಷ್ಟು ಒತ್ತಡ ಕಡಿಮೆಯಾಗಿದೆ
ಕಾರ್ಪೊರೇಟ್ ಪ್ರೋಗ್ರಾಂ ಸಂಶೋಧನಾ ಪಾಲುದಾರ:
ಇನ್ನರ್ ಇಂಜಿನಿಯರಿಂಗ್ ಆನ್ಲೈನ್ ಕಾರ್ಯಕ್ರಮದಿಂದ ಚೈತನ್ಯದಲ್ಲಿ, ಸಂತೋಷದಲ್ಲಿ ಮತ್ತು ಕೆಲಸದ ನಿರ್ವಹಣೆಯಲ್ಲಿ ಗಮನಾರ್ಹವಾಗಿ ಹೆಚ್ಚಳವಾಗುತ್ತದೆ.
ಕಾರ್ಪೊರೇಟ್ ಪ್ರೋಗ್ರಾಂ ಸಂಶೋಧನಾ ಪಾಲುದಾರ:
ಶಾಂಭವಿ ಕ್ರಿಯಾವನ್ನು ಅಭ್ಯಾಸ ಮಾಡುತ್ತಿರುವವರ ಒಂದು ಸಮೀಕ್ಷೆ ಮಾಡಿದಾಗ, ತಿಳಿದು ಬಂದ ವರದಿಯಂತೆ ಒಂದು ವರ್ಷದ ಸತತ ಶಾಂಭವಿ ಮಹಾಮುದ್ರ ಅಭ್ಯಾಸದಿಂದ ಗಮನಾರ್ಹವಾದ ಮಾನಸಿಕ ಹಾಗು ಭಾವನಾತ್ಮಕ ಪ್ರಯೋಜನಗಳು ಸಿಕ್ಕಿವೆ. ಜೀವನಶೈಲಿಗಳನ್ನು ಬದಲಾಯಿಸದೇ, ಶಾಂಭವಿಯ ಅಭ್ಯಾಸದಿಂದ ಉತ್ತಮ ಗಮನ, ಹೆಚ್ಚಿನ ಆನಂದ ಮತ್ತು ಆಂತರ್ಯದಲ್ಲಿ ನೆಮ್ಮದಿ ಸಿಗುವುದು ಸಾಬೀತಾಗಿದೆ.
A study conducted on 536 Shambhavi practitioners showed improvement in the following areas:
ಆರೋಗ್ಯ ಪರಿಸ್ಥಿತಿಗಳಲ್ಲಿನ ಸುಧಾರಣೆಗಳ ಕುರಿತಾದ ಸಮೀಕ್ಷೆಯಲ್ಲಿ, 536 ಶಾಂಭವಿ ಅಭ್ಯಾಸ ಮಾಡುವವರು ತಲೆನೋವು, ಮೈಗ್ರೇನ್, ಅಲರ್ಜಿ, ಆಸ್ತಮ, ಬೆನ್ನು ನೋವು ಮತ್ತು ಮುಟ್ಟಿನ ಕಾಯಿಲೆಗಳಂತಹ ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಪಡೆಯುವಲ್ಲಿ ಕ್ರಿಯಾ ಪರಿಣಾಮ ಬೀರಿದೆ ಎಂದು ಸಾಕ್ಷ್ಯ ನೀಡಿದ್ದಾರೆ. ಸಮೀಕ್ಷೆಗಳ ಪ್ರಕಾರ ನಿದ್ರಾಹೀನತೆಯ ಪ್ರಕರಣಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ, ಇದಲ್ಲದೆ 40% ಪ್ರಕರಣಗಳಲ್ಲಿ ಔಷಧೋಪಚಾರವನ್ನು ಕಡಿಮೆ ಮಾಡಲು ಅಥವಾ ತೆಗೆದುಹಾಕಲು ಕಾರಣವಾಗುತ್ತದೆ ಎಂಬುದು ತಿಳಿಯಬಂದಿದೆ.
ನಿಯಮಿತ ಅಭ್ಯಾಸದೊಂದಿಗೆ ಸುಧಾರಣೆಯನ್ನು ಹೊಂದಿದ ಶೇಕಡಾವಾರು ವ್ಯಕ್ತಿಗಳು
75% ಮಹಿಳೆಯರು ಮುಟ್ಟಿನ ಸಮಸ್ಯೆಗಳನ್ನು ಅನುಭವಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಕ್ರಿಯಾವನ್ನು ಪ್ರಾರಂಭಿಸುವ ಮೊದಲು ಮತ್ತು ಆರು ತಿಂಗಳ ಅಭ್ಯಾಸದ ನಂತರ ಮುಟ್ಟಿನ ಕಾಯಿಲೆಗಳ ಹರಡುವಿಕೆಯ ಬಗ್ಗೆ, , ಪೂಲೆ ಹಾಸ್ಪಿಟಲ್ಸ್ ಎನ್ಎಚ್ಎಸ್ ಟ್ರಸ್ಟ್ , ಯುಕೆ, ಮತ್ತು ಇಂಡಿಯಾನಾ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ತಂಡವು ಶಾಂಭವಿ ಮಹಾಮುದ್ರಾದ 128 ಮಹಿಳಾ ವೈದ್ಯರ ಪ್ರಶ್ನಾವಳಿ ಸಮೀಕ್ಷೆಯನ್ನು ನಡೆಸಿತು.
Maturi R et al. ಈಶಾ ಯೋಗಾಭ್ಯಾಸ ಮಾಡುವವರಲ್ಲಿನ ಯೋಗಕ್ಷೇಮದ ಕುರಿತಾದ ಸಮೀಕ್ಷೆ. ಮಾರ್ಚ್ 2010
ಮುರಳಿಕೃಷ್ಣನ್ ಕೆ, ಬಾಲಕೃಷ್ಣನ್ ಬಿ, ಬಾಲಸುಬ್ರಮಣಿಯನ್ ಕೆ, ವಿಸ್ನೆಗರವಾಲಾ ಎಫ್. ಅಲ್ಪಾವಧಿಯ ಹೃದಯ ಬಡಿತದ ವ್ಯತ್ಯಾಸವನ್ನು ಬಳಸಿಕೊಂಡು ಹೃದಯ ಸ್ವಾಯತ್ತ ನರಮಂಡಲದ ಮೇಲೆ ಈಶಾ ಯೋಗದ ಪರಿಣಾಮವನ್ನು ಅಳೆಯುವುದು. ಜೆ ಆಯುರ್ವೇದ ಇಂಟಿಗ್ರರ್ ಮೆಡ್. ಏಪ್ರಿಲ್ 2012.
ಸಂತೋಷ್ ಜೆ, ಅಗ್ರವಾಲ್ ಜಿ, ಭಾಟಿಯಾ ಎಂ, ನಂದೀಶ್ವರ ಎಸ್ ಬಿ, ಆನಂದ್ ಎಸ್.
ವಿಂಚುರ್ಕರ್ ಎಸ್, ಟೆಲ್ಲೆಸ್ ಎಸ್, ವಿಶ್ವೇಶ್ವರಯ್ಯ ಎನ್ ಕೆ. ನಿದ್ರೆಯ ಮೇಲೆ ದೀರ್ಘಕಾಲೀನ ಧ್ಯಾನ ಅಭ್ಯಾಸದ ಪರಿಣಾಮ: ಹೊಂದಿಸಿದ ನಿಯಂತ್ರಿತ ಪ್ರಯೋಗ. ಯೋಗಿಸಂ(YOGism) ಕುರಿತು ಅಂತರರಾಷ್ಟ್ರೀಯ ವಿಚಾರ ಸಂಕಿರಣ. ಡಿಸೆಂಬರ್ 2010.
ನೀಧಿರಾಜನ್ ಟಿಪಿ, ಮಾತುರಿ ಆರ್, ಬಾಲಕೃಷ್ಣನ್ ಬಿ. ಮುಟ್ಟಿನ ಅಸ್ವಸ್ಥತೆಗಳ ಮೇಲೆ ಈಶಾ ಯೋಗದ ಪರಿಣಾಮ.
© 2019, Isha Foundation, Inc.
ನಿಯಮಗಳು ಮತ್ತು ಷರತ್ತುಗಳು. |
ಗೌಪ್ಯತಾ ನೀತಿ. | Powered by Fastly