ಇನ್ನರ್ ಇಂಜಿನಿಯರಿಂಗ್ ಸಮಾಪಣೆ

ಪ್ರಪಂಚದಾದ್ಯಂತ ಆಯ್ದ ನಗರಗಳಲ್ಲಿ ಸದ್ಗುರುಗಳು ಖುದ್ದಾಗಿ ಇನ್ನರ್ ಇಂಜಿನಿಯರಿಂಗ್ ಸಮಾಪಣೆಯನ್ನು ನಡೆಸುತ್ತಾರೆ. ಇನ್ನರ್ ಎಂಜಿನಿಯರಿಂಗ್ ಆನ್‌ಲೈನ್ ಪೂರ್ಣಗೊಳಿಸಿದವರಿಗೆ ಲಭ್ಯವಿರುವ ಈ 2 ದಿನಗಳ ಕಾರ್ಯಕ್ರಮವು, ಶಾಂಭವಿ ಮಹಾಮುದ್ರ ಕ್ರಿಯಾ 21 ನಿಮಿಷದ ಶಕ್ತಿಯುತ ಮತ್ತು ಅಂತರ್ ಶುದ್ಧೀಕರಣದ ವಿಧಾನವಾದ ಶಾಂಭವಿ ಮಹಾಮುದ್ರ ಕ್ರಿಯಾದ ಜೊತೆಗೆ ಪೂರ್ವಸಿದ್ಧತೆಯ ಆಸನಗಳನ್ನು ಒಳಗೊಂಡಿರುತ್ತದೆ.

ಸದ್ಗುರುಗಳೊಂದಿಗಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದವರಿಗೆ, ಈಶಾ ಯೋಗ ಶಿಕ್ಷಕರ ಮೂಲಕ ವಿಶ್ವದಾದ್ಯಂತ ಆಯಾ ನಗರದ ಈಶಾ ಕೇಂದ್ರಗಳಲ್ಲಿ ನಿಯಮಿತವಾಗಿ ಇನ್ನರ್ ಇಂಜಿನಿಯರಿಂಗ್ ಸಮಾಪಣೆ ನೀಡಲಾಗುತ್ತದೆ.

ಪೂರ್ವಾಪೇಕ್ಷಿತ: ಇನ್ನರ್ ಇಂಜಿನಿಯರಿಂಗ್ ಆನ್‌ಲೈನ್

ಶಾಂಭವಿ ಮಹಾಮುದ್ರ ಕ್ರಿಯಾ

ಈ ಕಾರ್ಯಕ್ರಮವು ಶಾಂಭವಿ ಮಹಾಮುದ್ರ ಕ್ರಿಯಾದ ನೇರ ಪ್ರಸಾರವನ್ನು ಒಳಗೊಂಡಿರುತ್ತದೆ, ಇದು ಪ್ರಾಚೀನವಾದ, ಶುದ್ಧಗೊಳಿಸುವ 21ನಿಮಿಷಗಳ ಯೋಗಾಭ್ಯಾಸವಾಗಿದ್ದು, ಸದ್ಗುರುಗಳು ಆಧುನಿಕ ಜಗತ್ತಿಗೆ ಕೊಡುಗೆ ನೀಡಿದ ಅಗಾಧ ಪರಿವರ್ತಕ ಶಕ್ತಿಯ ಯೋಗಾಭ್ಯಾಸವಾಗಿದೆ. ಶಾಂಭವಿ - ನಿಮ್ಮ ದೇಹ, ಮನಸ್ಸು, ಭಾವನೆಗಳು ಮತ್ತು ಶಕ್ತಿಗಳು ಸಾಮರಸ್ಯದಿಂದ ಕಾರ್ಯನಿರ್ವಹಿಸುವಂತೆ ನಿಮ್ಮ ಇಡೀ ವ್ಯವಸ್ಥೆಯನ್ನು ಸರಿ ಹೊಂದಿಸುತ್ತದೆ. ನಿಮ್ಮ ಆನಂದಕ್ಕೆ ಕಾರಣವಾದ ನಿಮ್ಮೊಳಗಿನ ರಸಾಯನವನ್ನು ಸ್ಥಾಪಿಸುವ ಮೂಲಕ ನಿಮ್ಮ ಜೀವನವನ್ನು ನೀವು ಬಯಸಿದ ರೀತಿಯಲ್ಲಿ ರಚಿಸಿಕೊಳ್ಳಲು ನಿಮ್ಮನ್ನು ಸಶಕ್ತಗಳಿಸುತ್ತದೆ.

ಇಂದು, ಇದಕ್ಕಾಗಿ ಸಮರ್ಪಿತ ಲಕ್ಷಾಂತರ ಜನರು ತಮ್ಮ ಭಾವನಾತ್ಮಕ ಸಮತೋಲನ, ಗಮನ, ಸ್ಥಿರತೆ, ದೇಹದಾರ್ಢ್ಯತೆ ಮತ್ತು ಸುಧಾರಿತ ಆರೋಗ್ಯವನ್ನು ಅನುಭವಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ.

ಶಾಂಭವಿ ಮಹಾಮುದ್ರ ಕ್ರಿಯಾ, ನಿಜವಾದ ಚಮತ್ಕಾರ

ಶಾಂಭವಿ ಮಹಾಮುದ್ರ ಸೃಷ್ಟಿಯ ಮೂಲವನ್ನು ಸ್ಪರ್ಶಿಸಬಲ್ಲ ಒಂದು ಸಾಧನ. ನಿಮ್ಮ ಆಂತರ್ಯದ ತಿರುಳನ್ನು ಸ್ಪರ್ಶಿಸುವ ಮೂಲಕ, ಪರಿವರ್ತನೆಯಾಗುತ್ತದೆ."
-ಸದ್ಗುರು

ಕಾರ್ಯಕ್ರಮದ ಮುಖ್ಯಾಂಶಗಳು

ಪ್ರಯಾಸರಹಿತ ಜೀವನಕ್ಕಾಗಿ ಪ್ರಾಯೋಗಿಕ ಸಾಧನಗಳು

ಜೀವನದ ಪ್ರಮುಖ ಅಂಶಗಳ ಜೊತೆ ವ್ಯವಹರಿಸಲು ಧ್ಯಾನ

ಪುನಶ್ಚೇತನ ಮತ್ತು ಸಮತೋಲನಕ್ಕಾದ ಯೋಗಾಭ್ಯಾಸಗಳು

ಜಾಗೃತಿಯ ಸಾಧನಗಳು

ಶಾಂಭವಿ ಮಹಾಮುದ್ರ ಕ್ರಿಯಾ

ನಿರಂತರ ಬೆಂಬಲ ಮತ್ತು ಗುಂಪು ಸೆಷನ್‍ಗಳು

ಆರೋಗ್ಯಕರ ಸಸ್ಯಾಹಾರಿ ಊಟ

ಚಿತ್ರ ಗ್ಯಾಲರಿ

ಮುಂಬರುವ ಕಾರ್ಯಕ್ರಮಗಳು